ಝೆನ್್ ಕಥೆಯೊಂದರಲ್ಲಿ ತುಂಬಾ ಹಸಿದಿದ್ದ ವ್ಯಕ್ತಿಯೊಬ್ಬ ಬಯಲಲ್ಲಿ ಒಣ ರೊಟ್ಟಿಯೊಂದನ್ನು ತಿನ್ನುತ್ತಿರುತ್ತಾನೆ. ಇವನ್ನಷ್ಟೆ ಹಸಿದಿದ್ದ ದಾರಿಹೋಕನ್ನೊಬ್ಬ ಆ ತುಂಡು ಒಣ ರೊಟ್ಟಿಗೆ ಕೈ ಚಾಚುತ್ತಾನೆ. ಆಗ ಆತ ಅಧ೯ ರೊಟ್ಟಿಯನ್ನು ಕೊಟ್ಟು `ಆಕಾಶದಲ್ಲಿ ಇರೋ ಚಂದ್ರ ಏನಾದರೂ ಕೈಗೆ ಸಿಕ್ಕಿದ್ದರೆ ಇಬ್ಬರು ತಿಂದು ಹಸಿವು ನೀಗಿಸಿಕೊಳ್ಳಬಹುದಿತ್ತಲ್ಲಾ' ಎಂದು ಮಾತು ಮುಗಿಸುತ್ತಾನೆ. ಈ ಮೇಲಿನ ಕಥೆಯನ್ನು `ಹಸಿವಿನ ಆಧ್ಯಾತ್ಮ' ಎಂಬ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ನಮ್ಮಲ್ಲಿ ಬಡತನ ಇದೇ ಅನ್ನೋದಕ್ಕಿಂತ ಹಸಿವು ತುಂಬಾ ಇದೆ ಎಂಬುದೇ ಧ್ವನಿಪೂಣ೯ವಾದುದು. ಹಸಿವು, ಅಪಮಾನ, ಅಸ್ಪೖಶ್ಯತೆಯಲ್ಲಿ ಮಿಂದೆದ್ದಿರುವ ದಲಿತ ಲೋಕ ಈಗಲೂ ಹಲ್ಲೆಗೆ, ಅಪಮಾನಕ್ಕೆ ತುತ್ತಾಗುತ್ತಲೇ ಇದೆ.
ಘಟನೆ 1-
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಡಾಬಾ ಹೊನ್ನಮ್ಮ ಎಂಬ ದಲಿತ ಮಹಿಳೆಯನ್ನು ಬಬ೯ರವಾಗಿ ಕೊಚ್ಚಿ ಕೊಲೆ ಮಾಡಲಾಯಿತು. ಕೊಲೆಯಾಗುವ ಮುನ್ನ ಅವಳು ಊಟ ಮಾಡುತ್ತಿದ್ದಳು. ಗುಟುಕು ನೀರು ಕುಡಿಯಲು ಅನುವಾಗುತ್ತಿದ್ದಾಗ ಈ ಕೊಲೆ ನಡೆದು ಹೋಯಿತು. ಸಾಯುವ ಮುನ್ನ ಅವಳು ನೀರಿಗಾಗಿ ಬೇಡಿಕೊಂಡಳು. ನೀರು ಕೊಡದೇ ಹತ್ಯೆ ಮಾಡಲಾಯಿತು.
ಘಟನೆ 2-
ದಲಿತ ಕೇರಿಗೆ ಭಿಕ್ಷುಕನ್ನೊಬ್ಬ ಭಿಕ್ಷೆಗೆ ಬಂದ. ಕೇರಿಯವರು ಅನ್ನ ಕೊಡಲು ಮುಂದಾದರು. ಆದರೆ ಆತ ಒರಟಾಗಿ ಅನ್ನವನ್ನು ತಿರಸ್ಕರಿಸಿ ಅಕ್ಕಿ ಇದ್ದರೆ ಕೊಡಿ ಅನ್ನ ಬೇಡ ಎಂದು ಬಿಟ್ಟ.
ಈ ಮೇಲಿನ ಎರಡೂ ಘಟನೆ ಕೇವಲ ಸಾಂಕೇತಿವಾದದ್ದು. ಇಂತಹ ಎಷ್ಟೋ ಅಪಮಾನವನ್ನು ದಲಿತರು ಈಗಲೂ ಅನುಭವಿಸುತ್ತಿದ್ದಾರೆ.
ಇಂದು ದಲಿತ ಸಂಘಷ೯ ಸಮಿತಿಯ ಹಲವು ಬಣಗಳು ಇವೆ. ದಲಿತ್್ ಫಾಲೋಯಿಂಗ್್ ಕೂಡ ಹೆಚ್ಚಾಗಿದೆ. ಇಷ್ಟಿದ್ದರೂ ದಲಿತರ ಮೇಲಿನ ಶೋಷಣೆ ಮಾತ್ರ ನಿಂತಿಲ್ಲ. ದಲಿತ ಸಂಘಷ೯ ಸಮಿತಿಗಳೆಲ್ಲಾ ಬಿಡಿ ಬಿಡಿಯಾಗಿರುವುದರಿಂದ ಅದು ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ಎಲ್ಲಕ್ಕೂ ಮುಖ್ಯವಾಗಿ ಪೊಲಿಟಿಕಲ್್ ಪವರ್್ ಇಲ್ಲದೇ ಇರುವುದು ಕೂಡ ದಲಿತ ಲೋಕ ಇನ್ನೂ ಅಪಮಾನಕ್ಕೆ ತುತ್ತಾಗುತ್ತಲೇ ಇದೆ.
ದಲಿತರಿಗೆ ಪೊಲಿಟಿಕಲ್್ ಪವರ್್ ಸಿಗುವ ಬಗ್ಗೆ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಮಾತ್ರ ಖಚಿತವಾಗಿ ಯೋಚಿಸುತ್ತಾ ಇದೆ. ಬೇರೆ ರಾಜ್ಯಗಳಲ್ಲಿ ಇದು ಕಡಿಮೆಯೇ ಅನ್ನಬಹುದು. ಹಾಗೆ ನೋಡಿದರೆ ಉತ್ತರ ಪ್ರದೇಶದಲ್ಲಿ ಜಾತಿ ನಿಂದನೆ(ಅಟ್ರಾಸಿಟಿ) ಕೇಸು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಸಕಾ೯ರದ ರಕ್ಷಣೆ ಕಡಿಮೆಯಾದಾಗ ಸಹಜವಾಗಿ ಅಟ್ರಾಸಿಟಿ ಪ್ರಕರಣಗಳು ತಲೆ ಎತ್ತುತ್ತವೆ. ಸಕಾ೯ರಗಳಿಗೆ ತನ್ನ ಅಧಿಕಾರ ಉಳಿಸಿಕೊಳ್ಳುವ ಕಾಳಜಿಯೇ ಮುಖ್ಯವಾಗಿದೆ. ರಾಜ್ಯದಲ್ಲಿರುವ ಹಾಲಿ ಸಕಾ೯ರ ಕೂಡ ದಲಿತರು ತಮ್ಮ ಓಟ್್ಬ್ಯಾಂಕ್್ ಅಲ್ಲ ಎಂದು ಕಡೆಗಣಿಸುತ್ತಾ ಹೊರಟಿದೆ. ಅದು ಕೆಲವೇ ವಗ೯ಗಳನ್ನು ಸಂತೋಷ ಪಡಿಸಲು ಹೊರಟಿದೆ.
ದಲಿತರ ಮೇಲೆ ಹಲ್ಲೆಗಳು, ದಲಿತರ ಹತ್ಯೆಗಳು ನಡೆದಾಗ ಸಕಾ೯ರ ದಿಗ್ಭ್ರಮೆಗೊಳ್ಥುತ್ತಿಲ್ಲ. ಎರಡು ದಶಕಗಳ ಕೆಳಗೆ ಬೇರೆ ಬೇರೆ ಜಾತಿಗಳಲ್ಲೂ ಕೂಡ ಪ್ರಗತಿಪರ ಆಲೋಚನೆ ಜಾಗೖತವಾಗುತ್ತಿತ್ತು. ಪ್ರಗತಿಪರ ಚಿಂತಕರ, ಬರಹಗಾರರ ದೊಡ್ಡ ಪ್ರಭಾವ ಇತಾ೯ ಇತ್ತು. ಆಗ ದಲಿತರು ಎಚ್ಚೆತ್ತುಕೊಳ್ಳುವುದರ ಜತೆಗೆ ಇತರೆ ಜಾತಿಯವರು ಕೂಡ ಜಾತಿಗಳ ವಿರುದ್ಧವಾಗಿ, ಅಸ್ಪೖಶ್ಯತೆ ವಿರುದ್ಧವಾಗಿ ಯೋಚಿಸಲು ಸಾಧ್ಯವಾಗುತ್ತಿತ್ತು. ಆದರೆ ಈಗ ಮತೀಯ ವಿಕಾರ ಹೆಚ್ಚುತ್ತಾ ಹೋಗುತ್ತಿದೆ. ಹೀಗಾಗಿ ಜಾತಿಯ ವಿಕಾರ ಬೆಳೆಯುತ್ತಾ ಇದೆ. ಮತೀಯ ವಿಚಾರ ಯಾವತ್ತೂ ಜಾತಿ ವಿನಾಶದ ಬಗ್ಗೆ ಮಾತನಾಡುತ್ತಾ ಇಲ್ಲ. ಇದು ಸದ್ಯದ ಪರಿಸ್ಥಿತಿ. ಈ ಹಿನ್ನೆಲೆಯಲ್ಲಿ ದಲಿತ ಲೋಕ, ಅಸ್ಪೖಶ್ಯತೆಯ ಭಿನ್ನ ಭಿನ್ನ ಅಪಮಾನಗಳನ್ನು ಎದುರಿಸುತ್ತಿರುವ ಇತರೆ ಸಣ್ಣ ಸಣ್ಣ ಜಾತಿಗಳು ಕೂಡ ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ.
ಅಸ್ಪೖಶ್ಯತೆ ಆಚರಣೆ ಹೊಟೇಲ್್ಗಳಲ್ಲಿ ಇಲ್ಲದಿರಬಹುದು. ಆದರೆ ಮನೆ ಬಾಡಿಗೆ ನೀಡುವ ವಿಷಯದಲ್ಲಿ ಈಗಲೂ ಕೂಡ ಅಸ್ಪೖಶ್ಯತೆ ಜಾರಿಯಲ್ಲಿದೆ. ಅಟ್ರಾಸಿಟಿ ಕೇಸು ಕೂಡ ದಲಿತರಿಗೆ ಉಪಯೋಗ ಆಗ್ತಾ ಇಲ್ಲ. ಜಾತಿ ನಿಂದನೆ ಕೇಸು ಬಿದ್ದರೂ ಸವಣೀ೯ಯರು, ಪೊಲೀಸ್್ ಹಾಗೂ ಕಾನೂನಿನಿಂದ ನುಣುಚಿಕೊಳ್ಳುತ್ತಾ ಇದ್ದಾರೆ. ಅಟ್ರಾಸಿಟಿ ಕೇಸ್್ನಲ್ಲಿ ಏಕೆ ಶಿಕ್ಷೆಯಾಗುತ್ತಿಲ್ಲ. ಇದು ಯಾರ ವೈಫಲ್ಯ, ಸಕಾ೯ರದ್ದೋ ಮತ್ಯಾರದ್ದೋ ಎಂಬುದರ ಬಗ್ಗೆ ಚಿಂತಿಸುವ ಗೋಜಿಗೂ ಸಹ ಹೋಗುತ್ತಿಲ್ಲ.
ಜಾತಿ ಐಡೆಂಟಿಟಿಗೆ ಬದ್ಧನಾಗೋದು ತಪ್ಪು ಎಂದು ಬಹಳಷ್ಟು ಮಂದಿಗೆ ಅನಿಸುತ್ತಾ ಇಲ್ಲ. ದಲಿತ ಸಮುದಾಯ ಎಚ್ಚರ ಆಗುತ್ತಿರುವ ಹೊತ್ತಲ್ಲಿ ದಲಿತರ ಹೊಸ ತಲೆಮಾರು ತನ್ನ ಹಕ್ಕುಗಳ ಬಗ್ಗೆ ಗಟ್ಟಿಯಾದ ನಿಲುವು ತೆಗೆದುಕೊಳ್ಳುತ್ತಿರುವ ಸಂದಭ೯ದಲ್ಲೇ ಸಮಸ್ಯೆಗಳು ಹೆಚ್ಚಾಗುತ್ತಿದೆ.
ಉತ್ತರಪ್ರದೇಶದಲ್ಲಿ ಅಟ್ರಾಸಿಟಿ ಕಡಿಮೆಯಾಗುತ್ತಿರುವುದಕ್ಕೆ ಮುಖ್ಯ ಕಾರಣ ಮಾಯಾವತಿ ಸಕಾ೯ರ ಬುದ್ದಿಸಂ ತತ್ವದಡಿ ಕೆಲಸ ಮಾಡುತ್ತಿದೆ. ಅಲ್ಲದೇ ಅಂಬೇಡ್ಕರ್್ ಚಿಂತನೆಯನ್ನು ದೊಡ್ಡ ಮಟ್ಟದಲ್ಲಿ ಹಬ್ಬಿಸುತ್ತಾ ಇದೆ. ದಲಿತ ಪರವಾಗಿ ಇರುವ ಅಧಿಕಾರಿಶಾಹಿಗಳು ಬೇಕು, ಪೊಲೀಸರು ಬೇಕು. ಅಲ್ಲಿನ ಸಕಾ೯ರವೇ ಪ್ರಗತಿ ಪರ ಚಿಂತನೆ ಹೊರಡಿಸಿದಾಗ ಸಹಜವಾಗಿ ಅಲ್ಲಿ ಅಟ್ರಾಸಿಟಿ ಕೇಸುಗಳು ಗಣನೀಯವಾಗಿ ತಗ್ಗಿದೆ. ದಲಿತರ ಮೇಲಿನ ಹಲ್ಲೆಗೆ ಸಕಾ೯ರ ಬಹಳ ಕಠಿಣ ಕ್ರಮ ಕೈಗೊಳ್ಳುತ್ತೆ ಎಂಬ ಸಕಾ೯ರದ ಭಯ ಇರಬೇಕು. ಉತ್ತರ ಪ್ರದೇಶದಲ್ಲಿ ಇದು ಇದೆ. ಆದರೆ ಬೇರೆ ರಾಜ್ಯಗಳಲ್ಲಿ ಮಾತ್ರ ಕಾಟಾಚಾರಕ್ಕೆ ಇದೆ.
ಅಲ್ಲದೇ ಅಲ್ಲಿನ ಬಹುಜನ ಸಮಾಜವಾದಿ ಪಕ್ಷ ತನ್ನ ಕಾಯ೯ಕತ೯ರ ಮಟ್ಟದಲ್ಲೂ ಕೂಡ ಜಾತಿಯತೆ ತಪ್ಪು ಅಂತಾ ಮಾತನಾಡುತ್ತಿದೆ. ಇವೆಲ್ಲಾ ಹೊಸ ಚಿಂತನೆಯನ್ನು ಹುಟ್ಟು ಹಾಕುವಲ್ಲಿ ಸಹಕಾರಿಯಾಗುತ್ತಿದೆ. ಜಾತಿ ವಿನಾಶದ ಬಗ್ಗೆ ರಾಜಕಾರಣಿಗಳು ಮಾತನಾಡುತ್ತಾ ಇಲ್ಲ. ಜಾತಿಯ ವಿಕಾರಗಳ ಬಗ್ಗೆ ಉಳಿದ ಜಾತಿಯವರು ಧ್ವನಿ ಎತ್ತುತ್ತಿಲ್ಲ. ಎಲ್ಲಕ್ಕೂ ಮಿಗಿಲಾಗಿ ದಲಿತರ ಬಗೆಗೆ, ಅವರ ಹಕ್ಕುಗಳ ಬಗ್ಗೆ ಮಾತನಾಡುವ ವಗ೯ಗಳಾದ ಶಿಕ್ಷಕರು, ವಕೀಲರು, ಮಠಾಧೀಶರು ಸುಮ್ಮನಿದ್ದಾರೆ. ಸಾಹಿತಿಗಳು, ಪ್ರಗತಿಪರರು ಮಾತ್ರ ದಲಿತರ ಬಗ್ಗೆ ಧ್ವನಿಯಾಗುತ್ತಾ ಇದ್ದಾರೆ.
ಜನಸಂಪಕ೯ ಇರುವ, ದಿನ ನಿತ್ಯ ತನ್ನ ಅಭಿಪ್ರಾಯ ವ್ಯಕ್ತಪಡಿಸುವವರು ಇದರ ಬಗ್ಗೆ ಮಾತನಾಡಬೇಕು. ಆದರೆ ಆ ವಗ೯ ಚಕಾರವೆತ್ತುತ್ತಿಲ್ಲ.
ಎರಡೂವರೆ ದಶಕಗಳ ಹಿಂದೆ ದಲಿತರ ಬಗ್ಗೆ ಪಿ. ಲಂಕೇಶ್್, ಸಿದ್ದಲಿಂಗಯ್ಯ, ಬಿ. ಕೖಷ್ಣಪ್ಪ, ದೇವನೂರು, ತೇಜಸ್ವಿ ಮುಂತಾದ ದೊಡ್ಡ ಬರಹಗಾರರು, ಹೋರಾಟಗಾರರು ದೊಡ್ಡ ಮಟ್ಟದಲ್ಲಿ ಧ್ವನಿ ಎತುತ್ತಿದ್ದರು. ಇವರ ಜತೆಗೆ ಲೇಖಕರ ಅನುಯಾಯಿಗಳು ಕೂಡ ಮಾತನಾಡುತ್ತಿದ್ದರು. ಈಗ ಅದು ಗಣನೀಯವಾಗಿ ಕಡಿಮೆಯಾಗಿದೆ. ದಲಿತರ ಬಗ್ಗೆ ಅವರ ರಕ್ಷಣೆ ಬಗ್ಗೆ ಗಟ್ಟಿಯಾಗಿ ಮಾತನಾಡುವ ಫೋರಂಗಳು ಕೂಡ ಮಾತು ನಿಲ್ಲಿಸಿದೆ. ಹೊಸ ಕಾಲದ ಬರಹಗಾರರು ಕೂಡ ಎಲ್ಲೆಡೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುತ್ತಿದ್ದಾರೆ.
ಹಿಂದುಳಿದ ವಗ೯ದವರಿಗಿಂತ ಹೆಚ್ಚು ವಿದ್ಯಾವಂತ ಮತ್ತು ಎಚ್ಚರಗೊಂಡ ವಗ೯ ದಲಿತರಲ್ಲಿ ಸೖಷ್ಟಿಯಾಗಿದೆ. ಆದರೂ ಕೂಡ ಅವರ ಮೇಲಿನ ದೌಜ೯ನ್ಯ ಕಡಿಮೆಯಾಗಿಲ್ಲ. ಒಬ್ಬ ಮಾಯಾವತಿ ಬಿಟ್ಟರೆ ಆ ಸಮುದಾಯದಲ್ಲಿ ದೊಡ್ಡ ರಾಜಕೀಯ ನೇತಾರರು ಹೊರಹೊಮ್ಮಿಲ್ಲ. ದಲಿತ ಸಮುದಾಯ ಮತ್ತು ಶೋಷಿತ ವಗ೯ದವರು ಒಗ್ಗೂಡದಂತೆ ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಾ ಇದೆ. ದಲಿತರು ರಾಜಕೀಯ ಅಧಿಕಾರ ಪಡೆಯುವುದನ್ನು ಎಲ್ಲಾ ರಾಜಕೀಯ ಪಕ್ಷಗಳು ತಪ್ಪಿಸುತ್ತಾ ಇದೆ. ಯಾವೊಂದು ಪಕ್ಷವು ದಲಿತರನ್ನು ಮುಖ್ಯಮಂತ್ರಿ ಮಾಡ್ತೀವಿ ಅಂತಾ ಹೇಳ್ತಾ ಇಲ್ಲ. ದಲಿತರ ದೌಜ೯ನ್ಯ ನಿಲ್ಲಬೇಕಾದರೆ ಅಧಿಕಾರ ಬೇಕು. ಸಕಾ೯ರದ ರಕ್ಷಣೆ ಇಲ್ಲದೇ ಹೋದರೆ ದಲಿತ ಸಮುದಾಯ ಅನಾಹುತಗಳನ್ನು ಎದುರಿಸಬೇಕಾದಂತ ಸ್ಥಿತಿ ನಿಮಾ೯ಣವಾಗುತ್ತಲೇ ಹೋಗುತ್ತದೆ.
ಹಿಂದೆಲ್ಲಾ ದಲಿತ ಸಂಘಷ೯ ಸಮಿತಿಗಳ ಸಭೆಗೆ ಆ ವಗ೯ಗಳ ಬಗ್ಗೆ ಕಾಳಜಿ ಇರುವ ಇತರೆ ಜಾತಿಯವರು ಕೂಡ ಹೋಗುತ್ತಿದ್ದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ಅವರ ಹೋರಾಟಕ್ಕೂ ದನಿಯಾಗುತ್ತಿದ್ದರು. ಆಗ ದಲಿತ ಸಂಘಷ೯ ಸಮಿತಿ ಸಭೆಗೆ ಬಡವರು ಹೋಗುತ್ತಿದ್ದರು. ಶ್ರಮಿಕರು ಹೋಗುತ್ತಿದ್ದರು. ಕೂಲಿ ಕಾಮಿ೯ಕರು ಕೂಡ ಹೋಗುತ್ತಿದ್ದರು. ಆದರೆ ಈಗ ದಲಿತ ಸಂಘಷ೯ ಸಮಿತಿ ಸಭೆಗೆ ಬೇರೆ ಜಾತಿಯವರು ಹೋಗುತ್ತಿಲ್ಲ. ಪ್ರಜ್ಞೆಯಲ್ಲಿ ಪಲ್ಲಟ ಉಂಟಾಗುತ್ತಿಲ್ಲ. ಜಾತಿಯತೆ ನಮ್ಮ ಪ್ರಜ್ಞೆಯ ವಿಕಾಸಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಯಾರೂ ವಿವೇಕ ಮೂಡಿಸುತ್ತಿಲ್ಲ.
ಅಸ್ಪೖಶ್ಯತೆ ಅನುಭವ ಇರುವ ದಲಿತರು ಮತ್ತು ಅಸ್ಪೖಶ್ಯತೆಯ ವಿಭಿನ್ನ ಅನುಭವ ಇರುವ ಕ್ಷೌರಿಕ ಸಮುದಾಯ ಒಂದಾಗಬೇಕಾದ ಸಂದಭ೯ದಲ್ಲಿ ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ದಲಿತನ ಮೇಲೆ ಹಲ್ಲೆ ನಡೆದಿದೆ. ಇದು ನಿಜಕ್ಕೂ ಅತ್ಯಂತ ಅಮಾನವೀಯ ಘಟನೆ. ಆದರೆ ಈ ಘಟನೆಯನ್ನು ಯಾರೂ ಕ್ಷೌರಿಕ ಸಮುದಾಯದ ವಿರುದ್ಧ ಮಾತನಾಡಬಾರದು. ಈ ಪ್ರಕರಣವನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಚಚಿ೯ಸಬೇಕು. ಕ್ಷೌರಿಕ ಸಮುದಾಯ ಸೇರಿದಂತೆ ಎಲ್ಲಾ ಅವಮಾನಿತ ಜಾತಿಗಳಲ್ಲಿ ಆತ್ಮಗೌರವ ತುಂಬುವ ಕೆಲಸವನ್ನು ದಲಿತ ಸಂಘಷ೯ ಸಮಿತಿ ಮಾಡುತ್ತಾ ಬಂದಿದೆ. ಕ್ಷೌರಿಕರು ಕೂಡ ಜಾತಿ ಪದ್ಧತಿಯಿಂದ ಅಸ್ಪೖಶ್ಯತೆಯ ಬೇರೆ ಬೇರೆ ರೀತಿಯಿಂದ ನೊಂದಿದ್ದಾರೆ. ನೆಲ್ಸನ್್ ಮಂಡೇಲಾ ಜನ್ಮದಿನೋತ್ಸವದಂದು ಹಾಸ್ಯ ನಟ ಮುತ್ತುರಾಜ್್ ಅವರು ದಲಿತ ಕೇರಿಗಳಿಗೆ ಹೋಗಿ ಕಟಿಂಗ್್ ಮಾಡುವ ಮೂಲಕ ಜಾಗೖತಿ ಮೂಡಿಸಿದ್ದರು. ಅವೆಲ್ಲವೂ ಚರಿತ್ರೆಯಲ್ಲಿ ದಾಖಲಾಗಬೇಕು. ಎಷ್ಟೋ ಕಡೆ ದಲಿತರನ್ನು ಈಗಲೂ ಜೀತದಾಳಾಗಿ ಇಟ್ಟುಕೊಂಡಿದ್ದಾರೆ. ಆದರೆ ಆ ಪ್ರಕರಣಗಳು ಮಾತ್ರ ಇನ್ನೂ ಹೊರ ಬಂದಿಲ್ಲ. ಕಿರುಗಾವಲು ಗ್ರಾಮದ ದಲಿತ ಚಿಕ್ಕಮಂಚಯ್ಯನ ಮೇಲೆ ದೌಜ೯ನ್ಯವಾದಾಗ ಬೇರೆ ಜಾತಿಯವರು ಹಡಪದ ಹಪ್ಪಣ ನ ಬಗ್ಗೆ ಹರಳಯ್ಯನ ಬಗ್ಗೆ ಹೇಳಬೇಕಾಗಿತ್ತು.
ಹಿಂದೆ ದಲಿತರ ಮೇಲೆ ಹಲ್ಲೆ, ದೌಜ೯ನ್ಯ ನಡೆದಾಗ ಬೇರೆ ಜಾತಿಯವರು ಕೂಡ ಖಂಡಿಸುತ್ತಿದ್ದರು. ಬೇರೆ ಬೇರೆ ಜಾತಿಯಲ್ಲಿನ ಜಾತಿಯತೆ ಬಗ್ಗೆ ಆಯಾ ಜಾತಿಯವರು ಸಂಕೋಚ ಆಗದಂತೆ ವತಿ೯ಸುತ್ತಿದ್ದಾರೆ. ಹೀಗಾಗಿ ದಲಿತರ ಮೇಲಿನ ದೌಜ೯ನ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ.
ಗ್ರಾಮೀಣ ಭಾಗದಲ್ಲೂ ಸಹ ರಾಜಕೀಯ ನೇತಾರರು ಜಾತಿಯತೆಯನ್ನು ದೊಡ್ಡ ಮಟ್ಟದಲ್ಲಿ ಸೖಷ್ಟಿಸುತ್ತಾ ಹೋಗಿದ್ದಾರೆ. ದಲಿತರಲ್ಲೇ ಎಡಗೈ, ಬಲಗೈ ಎಂದು ರಾಜಕೀಯ ನೇತಾರರು ವಗೀ೯ಕರಿಸಿದ್ದಾರೆ.
ಒಟ್ಟಾರೆಯಾಗಿ ದಲಿತರ ಬಗ್ಗೆ ಎಲ್ಲ ಜಾತಿಯವರು ಮಾತನಾಡಬೇಕಿದೆ. ಸಕಾ೯ರದ ರಕ್ಷಣೆ ಇಲ್ಲದಿದ್ದಾಗ ದೌಜ೯ನ್ಯಗಳು, ಜಾತಿ ನಿಂದನೆ ನಡೆಯುತ್ತಾ ಹೋಗುತ್ತೆ. ಹೀಗಾಗಿ ದಲಿತರಿಗೆ ರಾಜಕೀಯ ಅಧಿಕಾರ ಕೂಡ ಮುಖ್ಯ. ದಲಿತರು, ಹಿಂದುಳಿದವರು, ಶೋಷಿತರು ಒಟ್ಟಾಗಿ ರಾಜಕೀಯ ಶಕ್ತಿ ಕಂಡುಕೊಳ್ಳಬೇಕಾಗಿದೆ.